Step into an infinite world of stories
ಕುಂ. ವೀರಭದ್ರಪ್ಪ ಅವರ ’ಜೈ ಭಜರಂಗಬಲಿ’ ಎಂಬ ಕಾದಂಬರಿಯ ಮೊದಲನೆಯ ಭಾಗವು ಹನುಮನ ಕಿಂಡಿ ಎಂಬ ಅಗ್ರಹಾರದ ವರ್ಣನೆಯಿಂದ ಆರಂಭವಾಗುತ್ತದೆ. ಸಮಕಾಲೀನ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿರುವ ಅಧಿಕಾರ ಲಾಲಸೆ, ಧನದಾಹ, ಕ್ರೌರ್ಯ, ಸುಳ್ಳು, ಮೊದಲಾದ ವಿಷಯಗಳನ್ನು ಕಟುವಾಗಿ ವಿಡಂಬಿಸಿದ್ದಾರೆ. ಇಲ್ಲಿ ಲೇಖಕರು ನೇರವಾಗಿ ಹೇಳದೆ ಪ್ರಾಣಿಗಳ ಮುಖಾಂತರ ಮಾನವನ ವ್ಯವಸ್ಥೆಯನ್ನು ಪರೋಕ್ಷವಾಗಿ ವಿಡಂಬನೆ ಮಾಡಿದ್ದಾರೆ.
ಈ ಕಾದಂಬರಿಯ ಬಗ್ಗೆ ಕತೆಗಾರ ಎಸ್. ದಿವಾಕರ ಅವರು’ಕಾದಂಬರಿಯಲ್ಲಿ ಅಸಂಗತ, ಅತಿವಾಸ್ತವಿಕ, ಅಲೌಕಿಕ, ಎಲ್ಲವೂ ಕಟು ವಾಸ್ತವವಾಗುತ್ತವೆ; ಏಕಮುಖ ನಿರೂಪಣೆಗೆ ಬಹುಮುಖತ್ವದ ಆಯಾದು ದೊರೆಯುತ್ತದೆ; ನಿರೂಪಣೆಯ ವೈನೋದಿಕ ಧಾಟಿಯೇ ಬದುಕಿನ ದಾರುಣತೆಯನ್ನು ಅನಾವರಣ ಮಾಡುತ್ತದೆ. ಇದುವರೆಗೆ ನಮ್ಮಲ್ಲಿ ಮಕ್ಕಳ ಕತೆಗಳಿಗಷ್ಟೇ ಸೀಮಿತವಾಗಿದ್ದ ಆಲಿಗರಿ ಕುಂವೀಯವರ ಈ ಹೊಸ ಕೃತಿಯಲ್ಲಿ ನಿಜಕ್ಕೂ ಪೂರ್ಣಾಂಗವಾಗಿ ನಮ್ಮ ಕಾದಂಬರಿ ಕ್ಷೇತ್ರದಲ್ಲಿ ಹೊಸದೊಂದು ದಾರಿಯನ್ನು ತೆರೆದು ತೋರಿಸಿದೆ. ಇದೊಂದು ಅಪರೂಪದ ಸಾಧನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಮರ್ಶಕ ಬಸವರಾಜ ಕಲ್ಗುಡಿ ಅವರು ’ಅಸಾಂಗತ್ಯ ಹಾಗೂ ಅರ್ಥಹೀನ ವಾತಾವರಣವನ್ನು ಇಡೀ ಕಾದಂಬರಿಯಲ್ಲಿ ತಣ್ಣಗೆ ಹೀಗೆ ಹಿಡಿದಿರುವುದು ಕುಂವೀಯವರ ಹೊಸ ಬರವಣಿಗೆಯ ಪಕ್ವತೆಗೆ ಸಾಕ್ಷಿಯಾಗಿದೆ. ತನ್ನ ತಂತ್ರಗಾರಿಕೆಯಿಂದ ಹಲವು ವಸ್ತುಗಳನ್ನು ನಿಭಾಯಿಸಿದ ಹಾಗೂ ಅವುಗಳನ್ನು ಜೋಡಿಸಿದ ರೀತಿಯಿಂದಾಗಿ 'ಜೈ ಭಜರಂಗಬಲಿ' ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆ’ ಎಂದಿದ್ದಾರೆ.
© 2022 Storyside IN (Audiobook): 9789354348754
Release date
Audiobook: 30 June 2022
English
India