Step into an infinite world of stories
Fiction
'ಇ-ಪುಸ್ತಕ'ವಾಗಿ ನನ್ನ ಬರಹಗಳನ್ನು ಒಂದೆಡೆ ಪೇರಿಸಿಡುವ ನಿಟ್ಟಿನಲ್ಲಿ ಇದು ಎರಡನೇ ಪ್ರಯತ್ನ. ಒಂದು ತಿಂಗಳ ಹಿಂದೆ ಹೊರ ಬಂದ 'ಗೋಡೆಗಳ ನಡುವೆ...' ಹೆಸರಿನ ನನ್ನ ಮೊದಲ ಇ-ಪುಸ್ತಕ ಓದಿ ಪ್ರತಿಕ್ರಿಯಿಸಿದ ಹಾಗು ಹಣ ಪಾವತಿಸುವ ಮೂಲಕ ಇಂತಹ ಮತ್ತಷ್ಟು ಪ್ರಯೋಗಗಳಿಗೆ ಬೆನ್ನು ತಟ್ಟಿದ ಎಲ್ಲರಿಗೂ ಧನ್ಯವಾದ.
'ಕುಶಲೋಪರಿ' ಕೂಡ ಈ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ. ಕಿವಿಗೆ ಬಿದ್ದ ಹಾಗು ಸ್ವತಃ ನಾನೇ ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ಹೇಳದಿದ್ದರೂ ಪರವಾಗಿಲ್ಲ, ಹಿಡಿಸದಿದ್ದರೆ ತಪ್ಪದೇ ಕಿವಿ ಹಿಂಡಿ!
ಮುಖಪುಟಕ್ಕೆ ಬಳಸಿಕೊಳ್ಳಲು ತಾನು ಸೆರೆ ಹಿಡಿದ ಫೋಟೊ ನೀಡಿ ಸಹಕರಿಸಿದ ನಿಖಿಲ್ ಪೂರ್ಣ ಹಾಗು ಇಲ್ಲಿನ ಬರಹಗಳನ್ನು ಪ್ರಕಟಿಸುವ ಮೂಲಕ ಪ್ರೋತ್ಸಾಹಿ ಸಿದ ಪ್ರಜಾವಾಣಿ, ಉದಯವಾಣಿ, ವಿಜಯವಾಣಿ, ಕನ್ನಡಪ್ರಭ, ತುಷಾರ, ಸಖಿ, ಪಂಜು ಪತ್ರಿಕಾ ಬಳಗಕ್ಕೆ ಧನ್ಯವಾದ.
Release date
Ebook: 15 February 2022
English
India