Step into an infinite world of stories
Fiction
ತಮ್ಮ ಕಾವ್ಯ ರಚನೆ ಮತ್ತು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳ ನಡುವೆ ಬಿ .ಆರ್ . ಲಕ್ಷ್ಮಣರಾವ್ ಸಾಂದರ್ಭಿಕವಾಗಿ ಮಾಡುತ್ತಲೇ ಬಂದಿರುವ ಲೇಖನಗಳ, ಟಿಪ್ಪಣಿಗಳ ಸಂಗ್ರಹ ಈ ‘ಪಡಿಮಿಡಿತ’.
ಕೃತಿ, ವಿದ್ಯಮಾನ, ವ್ಯಕ್ತಿ, ವಿಚಾರ- ಯಾವುದರ ಬಗ್ಗೆಯೂ ಇದಮಿತ್ಧಂ ಧೋರಣೆ ತಳೆಯದ ಅಥವಾ ಅಂತಹ ಧೋರಣೆ ಅವರ ಸ್ವಭಾವದಲ್ಲೇ ಇಲ್ಲದ ಕವಿ ಲಕ್ಷ್ಮ ಣರಾವ್ ಅವರ ಲೇಖನಗಳು ನಾವೆಲ್ಲ ಯಾವಾಗಲೂ ದೂಡ್ಡ ಮತ್ತು ಒರಟು ಧ್ವನಿಯಲ್ಲಿ ಸರ್ವ ಜ್ಞರಂತೆ ಮಾತಾಡುತ್ತಾ ಏನೇನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಸೂಚಿಸುವುದರಿಂದ ಈವತ್ತಿನ ಸಾಂಸ್ಕೃತಿಕ ವಾತಾವರಣದಲ್ಲಿ ಮುಖ್ಯವಾಗುತ್ತವೆ.
ಬಿ . ಆರ್. ಎಲ್. ಅವರಿಗೆ ಯಾವುದೇ ವಿಚಾರ ಮತ್ತು ಅಭಿಪ್ರಾಯವನ್ನು ಓದುಗರ ಮೇಲೆ ಹೇರುವುದರಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲ. ಎಲ್ಲರೂ ಮರಿ ಚಿಂತಕರಂತೆ, ದಾರ್ಶನಿಕರಂತೆ ಪೋಸು ಕೊಡುತ್ತಿರುವ ಈ ದಿನಗಳಲ್ಲಿ ಇದೊಂದು ಅಪರೂಪದ ಗುಣವೇ ಸರಿ. ಬದಲಿಗೆ, ಓದುಗನೊಡನೆ ಪ್ರಘಲ್ಲವಾಗಿ ಸಂಭಾಷಿಸುವುದರಲ್ಲೇಹೆಚ್ಚು ಕಳಕಳಿ. ಈ ಅಂಶವೇ ಇಲ್ಲಿಯ ಲೇಖನಗಳ ಸಂವಹನಶೀಲತೆಗೆ ಮುಖ್ಯಕಾರಣ.
ತೆಯಿಂದ ಹಿಂತೆಗೆಯುತ್ತಾರೆಂದು ಭಾವಿಸಬಾರದು , ‘ದಿಗಂಬರ ಕಾವ್ಯ,’ ನಾಡಿಗರ ‘ಪಂಚಭೂತಗಳು,’ ಲಂಕೇಶರ ಕಾವ್ಯ, ಸುಬ್ರಾಯ ಚೊಕ್ಕಾಡಿಯವರ ಕಾವ್ಯಜೀವನದ ಮೊದಲ ಕಾಲಘಟ್ಟದ ನವ್ಯ ಕಾವ್ಯ ಮನೋಧರ್ಮ – ಇಂತಹ ಬರಹಗಳಲ್ಲಿ ಖಚಿತ ಮತ್ತು ನಿಷ್ಠುರ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಸತ್ಯವನ್ನು ಹೇಳಬೇಕಾದಾಗ ಇನ್ನೊಬ್ಬರನ್ನು ನೋಯಿಸಿಯೇ ಹೇಳಬೇಕೆಂಬ ಧೋರಣೆಯನ್ನು ಬಿ .ಆರ್ ಎಲ್. ಮಾನ್ಯ ಮಾಡುವುದಿಲ್ಲ.
ಹಿನೋಟದ ಜೊತೆ ಜೊತೆಗೇ ಸಮಕಾಲೀನತೆಯನ್ನೂ ಬೆರೆಸಿ, ಪ್ರಶ್ನೆಗಳನ್ನೆತ್ತುವುದು ಇಲ್ಲಿಯ ಲೇಖನಗಳ ಇನ್ನೊಂದು ಗುಣ. ಎಲಿಯಟ್ ಕಾವ್ಯದಷ್ಟೇ ಯೇಟ್ಸ್ ಕಾವ್ಯವೂ ನವ್ಯ ಕಾವ್ಯ ರಚನೆಯ ಮೇಲೆ ಪರಿಣಾಮ ಬೀರಿದ್ದರೆ ಎಂಬ ಪ್ರಶ್ನೆ ಇಂತಹ ಹಿನ್ನೆಲೆಯಲ್ಲೇಹುಟ್ಟಿರುವುದು. ನಿಸಾರ್, ಕಾಳಿಂಗರಾಯರನ್ನು ಕುರಿತ ಲೇಖನಗಳು ಈ ಸ್ವರೂಪದವೇ.
ವೈನೋದಿಕ ಧಾಟಿಯಲ್ಲಿ ಬರೆಯುತ್ತಲೇ ಸತ್ಯವನ್ನು ಇನ್ನಷ್ಟು ಮೊನಚಾಗಿ ಕಾಣಿಸುವುದು ನನಗೆ ಈ ಬರಹಗಳಲ್ಲಿ ಇಷ್ಟವಾದ ಇನ್ನೊಂದು ಗುಣ . ತನ್ನ ಬಗ್ಗೆ ಬರೆದುಕೊಳ‍್ಳುವಾಗ ಮುಕ್ತವಾಗಿ ಬರೆಯುವ ಬಿ. ಆರ್.ಎಲ್. ಮತ್ತೊಬ್ಬರ ಬಗ್ಗೆ ಬರೆಯುವಾಗ ತೋರುವ ಸಂಯಮ ಮತ್ತು ಎಚ್ಚರ ಇಲ್ಲಿನ ವ್ಯಕ್ತಿ ಚಿತ್ರಗಳಿಗೆ ಒಂದು ಸಮತೋಲನದ ಧ್ವನಿಯನ್ನು ಕೊಟ್ಟಿದೆ.
ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಸ್ವೀಕರಿಸುತ್ತಲೇ, ಒಪ್ಪುತ್ತಲೇ, ತನ್ನ ಮನಸ್ಸನ್ನು ಸದಾ ಆರೋಗ್ಯವಾಗಿ, ಪ್ರಘಲ್ಲವಾಗಿ, ನಿರ್ಮತ್ಸರವಾಗಿ ಇಟ್ಟುಕೊಂಡಿರುವ ಸಂವೇದನಾಶೀಲರೊಬ್ಬರು ಬರೆಯುವ ವೈಚಾರಿಕ , ವಿಮರ್ಶಾತ್ಮಕ ಬರಹಗಳು ಹೇಗೆ ಮೌಲಿಕವೂ, ಸಂವಹನಶೀಲವೂ ಆಗಿರಬಲ್ಲದೆಂಬುಕ್ಕೆ ಈ ಸಂಗ್ರಹ ಒಂದು ಉತ್ತಮ ನಿದರ್ಶನ.
Release date
Ebook: 15 February 2022
English
India