Step into an infinite world of stories
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪೂ ಕನಸುಗಾರ ದೊರೆ. ಅವನು ತಾನು ಕಂಡ ಕನಸುಗಳನ್ನು ಟಿಪ್ಪಣಿ ರೂಪದಲ್ಲಿ ಬರೆದಿಟ್ಟಿದ್ದ, ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸ್ವರ್ಣ ಮಹೋತ್ಸವ ವರ್ಷದಲ್ಲಿ ಬಿಬಿಸಿಯು ಗಿರೀಶರಿಗೆ ನಾಟಕ ಬರೆಯುವಂತೆ ಕೋರಿದಾಗ ಅವರು ಟಿಪೂವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡರು. ಟಿಪೂವಿನ ಕನಸುಗಳನ್ನು ನಾಟಕವಾಗಿಸಿದರು. ಓದು ಕೃತಿಯಾಗಿ ಯಶಸ್ವಿಯಾದ ಈ ನಾಟಕ ರಂಗದ ಮೇಲೆಯೂ ಮುಖ್ಯವಾಗಿತ್ತು.ಗಿರೀಶ ಕಾರ್ನಾಡ್ ಅವರ ನಾಟಕ ‘ಟಿಪ್ಪು ಸುಲ್ತಾನ್ ಕಂಡ ಕನಸು’ - 1997ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿ.ಸಿ ರೇಡಿಯೋದವರು ಗಿರೀಶ್ ಕಾರ್ನಾಡ್ ಅವರಿಗೆ ಸ್ವಾತಂತ್ರ್ಯದ ದಿನ ಬಿತ್ತರಿಸಲು ಒಂದು ನಾಟಕ ಬರೆದುಕೊಡಲು ಕೇಳಿದ ಕಾರಣಕ್ಕಾಗಿ ಕಾರ್ನಾಡ್ ಅವರು ಬರೆದ ನಾಟಕವಿದು.ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತನ್ನು ಸೂಚ್ಯವಾಗಿ ಬಂದಾಗ ನನಗೆ ಕೂಡಲೇ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ ಎಂದು ಗಿರೀಶ್ ಕಾರ್ನಾಡ್ ಹೇಳುತ್ತಾರೆ. ತನ್ನ ಇಡೀ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್ ಅವರಿಂದ ಕೇಳಿದಂದಿನಿಂದ ನನಗೆ ಟಿಪೂವಿನಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು ಎನ್ನುತ್ತಾರೆ ಕಾರ್ನಾಡ್. ಅದೇ ಈ ನಾಟಕದ ಆರಂಭ ಬಿಂದು ಎಂಬುದು ಅವರ ಅಭಿಪ್ರಾಯ.
© 2023 Storyside IN (Audiobook): 9789354340659
Release date
Audiobook: 12 January 2023
Tags
English
India